Friday, August 27, 2010

ನೆನಪುಗಳು



ನಾನು ಹೊಸ ಕಾಲೇಜ್ಗೆ ಹೋಗೋಕೆ ಶುರು ಮಾಡಿ ಒಂದು ತಿಂಗಳು ಕಳೆಯಿತು ,ನನ್ನ ಇಂಜಿನಿಯರಿಂಗ್ ದಿನಗಳ ನೆನಪು ಬರೋದಕ್ಕೆ ಶುರು ಆಗಿವೆ , ನಾವು ದಿನಾ ಬೆಳಗ್ಗೆ ೨೫೩ ನಂಬರ್ ಬಸ್ ಗಳನ್ನು ಕಾಯೋದು , ಸೋಲದೇವನಹಳ್ಳಿ ಬಸ್ ಸ್ಟಾಪ್ ಇಂದ ನಮ್ಮ ಕಾಲೇಜ್ ವರೆಗೂ ಎರಡು ಕಿಲೋ ಮೀಟರ್ ನಡೆಯೋದು , ಶುರು ವಿನಲ್ಲಿ ಬೇಜಾರು ಆಗಿದ್ದು ನಿಜ ಆದರೆ ಬೇಜಾರು ಬಹಳ ದಿನ ಇರಲಿಲ್ಲ ,ನಾವೆಲ್ಲರೂ ಎಡರು ಕಿಲೋ ಮೀಟರ್ ನಡೆಯೋದನ್ನೇ ಎಂಜಾಯ್ ಮಾಡಿದ್ವೇ , ಮತ್ತೆ ಸೋಲದೇವನಹಳ್ಳಿ ಬಸ್ ಸ್ಟಾಪ್ ನಲ್ಲಿ ಇದ್ದ ದೊಡ್ಡ ಹಾಲದ ಮರ ,ಆದರೆ ಆ ಮರ ಇವಾಗ ಇಲ್ಲ ,ನಮ್ಮ ಮೆಚಿನ್ನ ಕ್ಲಾಸ್ ರೂಂ ,ಕ್ಯಾಂಟೀನ್ ಇವೆಲ್ಲ ಬರಿ ನೆನಪು ಮಾತ್ರ .


ನನಗೆ ಕ್ಲಾಸ್ ಇಂಟರೆಸ್ಟಿಂಗ್ ಆಗಿ ಇಲ್ಲ ಅಂದ ತಕ್ಷಣ ನನ್ನ ಗಮನ ಲಾಸ್ಟ್ ಪೇಜ್ ಮೇಲೆ ಹೂಗುತ ಇತ್ತು , ನಾನು ನಿಜವಾಗಲು ಪಾಠ ಕೇಳಿದು ಶೋಭ ,ವಾಣಿ ಮೇಡಂ ಮರಿ ಗೌಡ ಮತ್ತೆ ನರೇಂದ್ರ ಸರ್ ಕ್ಲಾಸ್ ಗಳಲ್ಲೇ :):):) ಅದರಲ್ಲೂ ಮರಿ ಗೌಡ ಸರ್ ಕ್ಲಾಸ್ ನಲ್ಲಿ ಫುಲ್ ಇಂಟರೆಸ್ಟ್ :):):) ,ನಮ್ಮ ಕಾಲೇಜ್ ಇವಾಗ ತುಂಬ ಚನ್ನಾಗಿ ಇದೆ. ಕನ್ನಡ ಫಿಲಂ ಶೂಟಿಂಗ್ ಗಳಿಗೆ ಏನು ಕೊರತೆ ಇಲ್ಲ , ಜಾಲಿ ಡೇಸ್ ಫಿಲಂ ನೆನಪು ಮಾಡಿಕೊಂಡರೆ ಸಾಕು ಆಚಾರ್ಯ ನೆನಪು ಬಂತು ಅಂತನೆ.


ನಂದಿನಿ ಅಂತು ಕಾಪಿ ಮಾಡೋದ್ರಲ್ಲಿ ನಂಬರ್ ೧ ಆಗಿದ್ಲು ,ನಾನು ಅವಳಿಗೆ ಬುದ್ಧಿವಾದ ಹೇಳುತ ಇರುತಿದ್ದೆ ನಾವು ಇಷ್ಟ ಪಟ್ಟು ಓದ ಬೇಕು ಕಷ್ಟ ಪಟ್ಟು ಅಲ್ಲ ನಾವು ಓದುವುದನ್ನ ಪ್ರೀತಿಸ ಬೇಕು ಅಂತ ಅದಕೆ ಅವಳು ನೀನು ಓದೋದರ ಬಗ್ಗೆ ಮಾತಾಡುತಿಧಿಯೋ ಅಥವಾ ಮನುಷ್ಯರ ಬಗ್ಗೆ ನೋ ಅಂತ ಕೇಳುತ ಇದ್ಲು :):) ನಾನು ಪ್ರೀತಿ anno ಪದ ಉಪಯೋಗಿಸುತಿದ್ದೆ ಅದಕ್ಕೆ ,


ಒಂದು ಸಾರಿ ಪನಿಭುಶನ್ ಸರ್ ಕ್ಲಾಸ್ ನಲ್ಲಿ ಒಬ್ಬ ನಿದ್ದೆ ಮಾಡುತ ಇದ್ದ , ಅವನ ಗೊರಕೆ ಬರುತ ಬರುತ ಜಾಸ್ತಿ ಆಗುತ ಹೋಯಿತು ,ನಾವೆಲ್ಲರೂ ಕಿಟಕೆ ಇಂದ ಹೊರಗೆ ನೋಡುತ ಇದ್ವಿ ಏನು ಶಬ್ದ ಇದು ಅನ್ನೋ ಅಸ್ಟರಲ್ಲಿ ಗೊತಾಯಿತು ಅದು ಅವನ ಗೊರಕೆ ಅಂತ ಸರ್ ಸಕತ್ ಕೂಲ್ ಅವನಿಗೆ ಡಿಸ್ಟರ್ಬ್ ಮಾಡಬೇಡಿ ಅಂತ ಹೇಳಿದ್ರು :):)) ನಮಗಂತು ನಗು ನಿಲಿಸಲು ಕಷ್ಟ ವಾಗಿ ಹೋಯ್ತು ,

ವಾಣಿ ಮೇಡಂ ಕ್ಲಾಸ್ ನಲ್ಲಿ ಅಂತು ಒಳ್ಳೆ ತಮಾಷೆ ನಡೀತಾ ಇರುತ ಇತ್ತು ಅವರು

ಕ್ಲಾಸ್ ಮಧ್ಯ ಪ್ರಶ್ನೆ ಕೇಳಿದ್ರೆ ಯಾರು ಉತ್ತರ ಕೊಡ್ತಾ ಇರಲಿಲ್ಲ ಅದಕ್ಕೆ ಅವರು 'y no reaction  ' ಅಂತ ಕೇಳ್ತಿದ್ರು ಅದಕೆ ನಾವು 'in internals v will give u full reaction mam ' ಅಂತ ಇದ್ವಿ ,






ಹಾಗೆ ಬರೆಯುತಾ ಹೋದರೆ ಇನ್ನು ಬಹಳಷ್ಟು ide ಸದ್ಯಕ್ಕೆ ಇಷ್ಟು ಸಾಕು ...........
.
                                             

minchu

ಮಿಂಚು ನನ್ನ ಪ್ರೀತಿಯ ಕನ್ನಡ ದ ಬ್ಲಾಗ್ , ಕನ್ನಡದಲ್ಲಿ ಬ್ಲಾಗ್ ಮಾಡಬೇಕು ಎಂಬ ಆಲೋಚನೆ ಬಹಳ ದಿನಗಳ ಹಿಂದೆ ಬಂತು , ನನ್ನ ಆಲೋಚನೆಗಳಿಗೆ  ರೆಕ್ಕೆ ಪುಕ್ಕ ಕಟ್ಟಿ ಭಾನಿಗೆ ಹಾರಿಸುವ ಒಂದು ಪ್ರಯತ್ನ ನನ್ನ ಮಿಂಚು ಬ್ಲಾಗ್;
ಅಪ್ಪಿ ತಪ್ಪಿ ತಪ್ಪಾದರೆ ತಿದ್ದುವ ಪ್ರಯತ್ನ ನೀವು ಮಾಡಿ .