Tuesday, April 5, 2011

ಮಲ್ಲಿಗೆ ಮನಸು

ಮಲ್ಲಿಗೆ  ಮನಸು ...........................


ಮನಸೇ ಹೊರಟೆ ನೀ ಎಲ್ಲಿಗೆ
ಮುಡಿದು ಕನಸುಗಳ ಮಲ್ಲಿಗೆ ,


ಮನಸ್ಸೇ,,,,,,,ಹಾಗೆ  ನವಿಲಿನಂತೆ ಕುಣಿದಾಡುವ ಮನಸ್ಸು  ,ಹೂವಿನಂತೆ ಹರಳುವ ಮನಸ್ಸು ,ಹಕ್ಕಿಯಂತೆ ಹಾರಾಡುವ ಮನಸ್ಸು ಕೆಲವು ಸಲ 
ಬಾಡಿದ ಹೂವಾಗಿ ಗರಿ ಮುದುರಿದ ಗುಬ್ಬಿಯಾಗಿಬಿಡಬಹುದು ,ಮನಸ್ಸು  ಮಲ್ಲಿಗೆಗಿಂತಲು ಮೃಧು , ಯಾವಾಗ ಯಾಕೆ ಅದಕ್ಕೆ ನೋವಾಗುತದೋ ಒಂದು ತಿಳಿಯುವುದಿಲ್ಲ ,ಇನ್ನು ನಮ್ಮ ಮನಸನ್ನೇ ನಾವು ಅರ್ಥಮಾಡಿಕೊಳ್ಳಲು ಎಷ್ಟು ಕಷ್ಟ ಪಡಬೇಕು ಅಂತ ಒಂದು ಸಂಧರ್ಭ ದಲ್ಲಿ ಇನ್ನೊಬರ ಮನಸನ್ನು ಅರ್ಥ ಮಾಡಿಕೊಲೋದು ಕಷ್ಟವಾದ ಕೆಲಸ :):):) ಇದು  ನನ್ನ ಅನುಭವಕ್ಕೆ ಬರುತಿರುವಂತ  ವಿಷಯ ,
ಎಲ್ಲಿಂದಲೋ ಕೇಳಿ ಬರುವ ನಮ್ಮ ಮೆಚಿನ್ನ ಹಾಡೊಂದು ಥಟ್ಟನೆ ಮನಸಿಗೆ ಉಲ್ಲಾಸದ ಅನುಭವವನ್ನು ತಂದು ಕೊಡಬಹುದು,
ಯಾವುದೋ ಹಳೆಯ ನೆನಪೊಂದು ನಮ್ಮ ನು  flashback ಗೆ ಕರೆದುಕೊಂಡು ಹೋಗಿಬಿಡಬಹುದು ,ಹಾಗೆ ಬಾಲ್ಯದ ಸವಿ ನೆನಪು ಮತ್ತೆ ನಮ್ಮನು ಮಕ್ಕಳನಾಗಿಸಿ ಬಿಡಬಹುದು ,  
ಎಂದು ಇಲ್ಲದ  ಮನಸ್ಸು ಮಳೆಯ   ಬರುವಿಕೆಗಾಗಿ  ಕಾಯುತ್ತ ಕುಳಿತಿದೆ ಅಂದರೆ ಅದು ಪ್ರೀತಿಯಲ್ಲಿ ಬೀಳೋದ್ರಲ್ಲಿದೇ 
ಎಂದೇ  ಅರ್ಥ,
ಕೆಲವು ಸಾರಿ ಮನಸ್ಸಲ್ಲಿ ಏನೋ ಉಳಿದುಕೊಂಡು ಬಿಡುತ್ತದೆ ಮನಸ್ಸಿನ ಮಾತು ಮನಸಲ್ಲೇ ಅನ್ನೋ ಹಾಗೆ ಇಂತ  
ಸಂಧರ್ಭದಲ್ಲೇ ಅದು  ಗುಬ್ಬಿ ಮರಿಯ ಹಾಗೆ ಮುದುರಿಕೊಂಡು ತನ್ನಷ್ಟಕ್ಕೆ ತಾನೇ ಇರಲು ಇಷ್ಟ ಪಡುತ್ತದೆ ,
ಸಿನಿಮಾ ಗಳ slowmotion    ನೆನಪು ಮಾಡಿಕೊಳ್ಳ ಬಹುದು hero   ಒಬ್ಬ railway  ಸ್ಟೇಷನ್ platform  ನಲ್ಲಿ  ಏನೋ ಕಳೆದು ಹೋಯ್ತು ಅನ್ನೋ ಭಾವನೆಯಲ್ಲಿ ನಿಂತಿರುತಾನೆ   ಅವನ ಕಣ್ಣ ಮುಂದೆ ಅ ಟ್ರೈನ್  ಹೊರಡುತದೆ ಆತ ಟ್ರೈನ್ ಅನ್ನು ನೋಡುತಲೆ ಇರುತ್ತಾನೆ  ಕೊನೆಗೂ   ಅವನು ಮನಸ್ಸನ್ನು 
ಬಿಚ್ಚಿ ಅ ಹುಡುಗಿಯ ಮುಂದೆ ಇಡುವುದಿಲ್ಲ ಟ್ರೈನ್  passಆಗಿ ಮರೆಯಾಗುತ್ತದೆ...............................
ಇನ್ನು ಕೆಲವು ಸಲ ಬದುಕಲ್ಲಿ ಬಣ್ಣ ಗಳೇ ಕಾಣಿಸುವುದಿಲ್ಲ  ಎಲ್ಲಿ ನೋಡಿದರು ಬರಿ ಎರಡೇ ಬಣ್ಣ ಒಂದು ಬಿಳಿ ಮತ್ತು 
ಇನ್ನೊಂದು ಕಪ್ಪು ,ಬಣ್ಣಗಳಿಲ್ಲದ ಬದುಕು ಇದರ ಅರ್ಥ ಮನಸ್ಸಿಗೆ ಮಾಡಿದನ್ನೇಮಾಡಿ ನೋಡಿದನ್ನೇ ನೋಡಿ ಬೋರ್ ಹೊಡಿತಾ ಇದೆ ಅಂತ , ನೋಡಿ ನಾವು ನಮ್ಮ daily routines ಗಳ ಮದ್ಯ ಸಿಕ್ಕಿಹಾಕಿಕೊಂಡು,,,,,,,,,ಮನಸ್ಸಿಗೆ boredom  ಅನುಭವವನ್ನು ಕೊಟ್ಟಿರುತಿವಿ ಅಂತ ಸಮಯದಲ್ಲಿ ಅದು change ಬಯಸುತಿರುತದ್ದೆ:):):)
ನಾವು    ನಮ್ಮಬದುಕಲ್ಲಿ ಏನನ್ನೋ ಯಾರನ್ನೋ miss ಮಾಡಿಕೊಂಡೆ ಇರುತೀವಿ ,ಮನಸ್ಸಿನ ಬದುಕಿನ  ಸಹಜವಾದ ಗುಣ 
ಅದೇ ಅಲ್ಲವೇ  ಇರುವುದೆಲ್ಲವ ಬಿಟ್ಟು ಇರದುದರ ಎಡೆಗೆ ತುಡಿಯುವುದೇ ಜೀವನ ,
ಕಾಲೇಜ್ ನಲ್ಲಿ ಕುಳಿತಾಗ ಮನೆಯದೆ ಚಿಂತೆ  ಮನೆಯನ್ನು  miss ಮಾಡಿಕೊಳುತಾರೆ ,ಮನೆಯಲ್ಲಿ ಕುಳಿತಾಗ 
ಕಾಲೇಜ್ miss ಮಾಡಿಕೊಳುತ್ತಾರೆ :):), ಇನ್ನು ಯಾರನ್ನೋ miss ಮಾಡಿಕೊಳ್ಳೋಕೆ ಶುರು ಮಾಡಿದ್ರೆ ಮುಗಿದೇ ಹೋಯ್ತು ಬಿಡಿ ಏನು ಅಂತ ಬರಿತ ಹೋಗ್ಲಿ :):),  
ಕಣ್ಣ ಮುಂದೆ ನಮ್ಮ ಸ್ನೇಹಿತರು ಆಪ್ತರು ಎಲ್ಲರು ಇದ್ದರುಕೂಡ  ಯಾರನ್ನೋ ಹುಡುಕೋಕೆ ಶುರು ಮಾಡುತ್ತೆ ನಮ್ಮ 
ಮನಸ್ಸು ಎಲ್ಲಾರು ಇದ್ದಾರೆ ಆದ್ರೆ ಅವ್ರು ಇಲ್ಲ ಅನ್ನಿಸುತ್ತದೆ                                               





Saturday, October 30, 2010

ಕಾಲೇಜ್ ಕೆಥೆ continued


Bmtc ಬಸ್ ಪ್ರಯಾಣ ನನಗೆ ಎಷ್ಟು ಅಭ್ಯಾಸ ಆಗಿಹೋಗಿದೆ ಅಂದರೆ ಮೊನ್ನೆ ಒಬ್ಬ ಪುಟ್ಟ ಬಾಲಕ ಬಸ್         ನಿಲ್ದಾಣ ದಲ್ಲಿ ಭಿಕ್ಷೆ
ಬೇಡುತಿದ್ದ ,ಅವನು ನನ್ನ ಮುಂಧೆ ನಿಂತು ಚೇಂಜ್ ಕೇಳುತಿದ್ದ ,ನಾನು  ತಕ್ಷಣ  pass ಅಂದು ಬಿಟ್ಟೆ :):):) ಪಾಪ ಅ ಪುಟ್ಟ ಹುಡುಗ ಏನು ತಿಳಿದು ಕೊಂಡಿತೋ  ಗೊತ್ತಿಲ್ಲ   ,
ಮತ್ತೆ ಕಾಲೇಜ್ ವಿಷಯಕ್ಕೆ ಬಂದ್ರೆ ,7th sem  ವಿದ್ಯಾರ್ಥಿ ಗಳು  ಬೇರೆ ಅಲ್ಲ ಮಂಗಗಳು ಬೇರೆ ಅಲ್ಲವೇ ಅಲ್ಲ , ನನ್ನ ಕ್ಲಾಸ್ ನಲ್ಲಿ ಅವರ ತಲೆ ಹರಟೆ ಜಾಸ್ತಿನೆ,ಅವರಿಗೆ ನನ್ನ feedback ಬರಿಯೋದಕ್ಕೆ ಹೇಳಿಧೆ " take  1 sheet ಅಂದೆ" ಅದ್ದಕೆ ಒಬ್ಬ" mam 1sheet is  not  enough  "ಅಂದ ಅದ್ದಕೆ ನಾನು" ok u  take  1 ಬುಕ್" ಅಂದೆ , ಎಲ್ಲರು ನಕ್ಕರು ,  ಅವರ ತಲೆ ಹರಟೆ ಕಮ್ಮಿ ಮಾಡುವುದಕ್ಕೆ  ಅವರಿಗೆ ಸೆಮಿನಾರ್ ಕೊಡೋದಕ್ಕೆ ಹೇಳಿಧೆ  , ಮೊದಲ ದಿನ ಬರಿ ಹುಡಗಿಯ್ರದ್ದೆ ಸೆಮಿನಾರ್ ಇತ್ತು ಹುಡುಗರು comments ಮಾಡಿದ್ದ್ಹೋ  ಮಾಡಿದ್ದು , ನಾನು ಹುಡುಗಿಯರಿಗೆ ಹೇಳಿಕೊಟ್ಟೆ ನಾಳೆ ಹುಡುಗರ ಸೆಮಿನಾರ್ ಇದೆ ನೀವು comments  ಮಾಡಿ ಅಂತ ಓಕೆ ಮೇಡಂ ಅಂದ್ರು ,ಅ  ನಾಳೆ ಬಂತು ಒಬ್ಭ ಹುಡುಗ ಸೆಮಿನಾರ್ ಕೊಡೋಕೆ ಬೋರ್ಡ್ ಅತ್ತಿರ ಹೋಧ ,ಸೆಮಿನಾರ್ ಗಾಗಿ ಬೇಕಾಗಿರೋದನ್ನ ಬೋರ್ಡ್ ಮೇಲೇ ಬರಿಯುದಕ್ಕೆ ಶುರು ಮಾಡಿದ ,ಹುಡುಗಿರೆಲ್ಲ wowಸೂಪರ್, wonderfull ಅಂತೆಲ್ಲ comment ಮಾಡಿದ್ರು ಅವನ0ನ್ತು ಆಶ್ಚರ್ಯದಿಂದ ಹಿಂದೆ ತಿರುಗಿ ನೋಡಿದ ನನಗಂತು ನಗು ತಡೆಧು ಕೊಳ್ಳೋಕೆ ಹಾಗಿರಲಿಲ್ಲ , ಏನೋ ಮಗ ನಿನಗೆ full    response   ಸಿಕ್ಥಿದೆ ಅಂದ್ರು ಬೇರೆ ಹುಡುಗರು ,ಮತೊಬ್ಬ ಬಂಧ ಅವನಿಗ0ತು  ಬೋರ್ಡ್ ಮುಂಧೆ ಹೀಗೆ ನಿಂತುಕೊಳ್ಳಬೇಕು  ಅನೋದೆ ಗೊತ್ತಿಲ್ಲ ,ಬಾಗಿ ಬಳುಕಿ ಏನೋ ಡಾನ್ಸ್ ಮಾಡುತಿರೋ ಹಾಗೆ ಕಾಣಿಸುತಿತ್ತು ಅವನಿಗೆ ಎಲ್ಲರು ಓ ಮಾಮ  ಅಂತಿದ್ರು , ನನಗಂತು ನಕ್ಕು ನಕ್ಕು ಸಾಕಾಗಿ ಹೋಯ್ತು ಅಂತು ಅವರ ಸೆಮಿನಾರ್   ಮುಗಿತು,
final exam ಬಂತು ಅಂದರೆ ಸಾಕು ನಾನ0ತು ಈ ಪ್ರಪಂಚನೆ ಮರೆತು ಬಿಡುತಿದ್ದೆ ,ಪ್ರಪಂಚದ ಜೊತೆ contact ಇರ್ತಾನೆ ಇರಲಿಲ್ಲ :) :):)
ಊಟ ಮಾಡೋದನ್ನ ಸಹ ಮರೆತು ಬಿಡುತಿದ್ದೆ ಅಂತು ಇಂತು exam ಬಂಧು ನಾನು question paper ಮುಂಧೆ ಕುಳಿತಾಗ ಏನ್ ಮಾಡುತೀನೋ ದೇವ್ರೇ ಕಾಪಾಡಪ್ಪ ಅಂದು question paper  ಓದುತಿದ್ದೆ    , friends  ಯಾರನ್ನ ನೋಡಿದರು ಓ ಇವರು ಚನ್ನಾಗಿ ಓದಿದ್ದಾರೆ ಅನ್ನಿಸುತಿತ್ತು,  questionpaper ಸುಲಭ ವಾಗಿದ್ದರೆ ಸದ್ಯ ಹೆಂಗೋ ಬಚಾವ್
    ಆದೆ ಅಂದು    ಕೊಳೋಧು, :):):) ,
ಗ್ರಹಚಾರ ಕೆಟ್ಟುಹೋಗಿ paper   ಕಷ್ಟವಾಗಿ ಬಂತು ಅಂದರೆ ಸಾಕು, ನನಗೆ ಮಾತ್ರ  ಕಷ್ಟ ಹಾಗಿದೆಯೋ ಅಥವಾ ನನ್ನ friends ಗು ಕಷ್ಟವಾಗಿದೆಯೋ ಎಂದು ತಿಳಿಧು------ಕೊಳೊದಕ್ಕೆ ಎಲಾರನ್ನು ಒಂದು ಸಾರಿ ನೋಡಿ  ಅವರ reactions   study   ಮಾಡುತಿದ್ದೆ :):) ,ಏನು ಮಾಡಿದ್ರು 35   ಮಾರ್ಕ್ಸ್ ಬರುವುದಿಲ್ಲ ಅನ್ನಿಸಿದರೆ ಮನೆಗೆ
 ಹೋದ ತಕ್ಷಣ ಎಲ್ಲರಿಗು ಹೇಳಿಬಿಡಬೇಕು ಚೆನ್ನಾಗಿ ಹಾಗಲಿಲ್ಲ ಅಂತ decide   ಮಾಡಿಕೊಂಡು ಆದರು ಬರಿಯೋದಕ್ಕೆ ಪ್ರಯತ್ನಪಡುತ್ತಿದೆ, ಇಷ್ಟು ಸಾಲದಕ್ಕೆ ತಲೆಯಲ್ಲಿ  ಯಾವುದಾದರು ಒಂದು ಹಾಡು ಬೇರೆ background music  ಇದ್ದಹಾಗೆ , "ಈ  ನಿನ್ನ ಕಣ್ಣಾಣೆ ಈ ನಿನ್ನ ಮನಸಾಣೆ----ಏ ಹುಡುಗ ನೀ ನನ್ನ ಪ್ರಾಣ ಕಣೋ ಅವಾಗ" exam   ಇದು ,ಸ್ವಲ್ಪ serious ಹಾಗಿ ಇರೋದನ್ನ ಕಲಿತುಕೊಳ್ಳೆ ಇಂದು "ಅಂತ ನನ್ನ  brain ಹೇಳುತಿತ್ತು,ಅಯ್ಯೋ ರಮ್ಯದು ಎಸ್ಟ್ ಆರಾಮ್ ಅಪ್ಪ ಓದೋಹಾಗಿಲ್ಲ ಬರಿಯೋಹಾಗಿಲ್ಲ ಅಂತ ನನ್ನheart   ಹೇಳುತಿತ್ತು ,ಹೀಗೆ 
brainಗು heartಗು ಮದ್ಯ ಚರ್ಚೆ ನಡೆದಿರುತ್ತಿತು ,ನಾವು collegedays   ನಲ್ಲಿ ಮಾಡಿದನೆಲ್ಲ ನೆನಪು ಮಾಡಿಕೊಂಡರೆ ಎಷ್ಟು ಚೆನ್ನಾಗಿತ್ತು     ಅನ್ನಿಸುತದ್ದೆ ಅಲ್ಲವ ?    nnnnnnnnnnnnnnnnnnnnnnnn
                                                   

Tuesday, September 28, 2010

ನನ್ನದಲ್ಲದ ಬದುಕು

                        ಅರಳಿದ ಕಂಗಳಲಿ ಮಿಂಚು
                    ಕೊಂಚವೂ  ಉಳಿದಿಲ್ಲ ,
                  ಕೈ ಬಳೆಯ ನಾಧ ಕಳೆದು
                  ಹೋಗಿದೆಯಲ್ಲ  ,
               ಅಕ್ಕರೆಯ ಸಕ್ಕರೆಯ ಪಿಸುಮಾತು
                ಕೇಳಿಬಂದಿಲ್ಲ ,
                   ನೀನಿಲ್ಲದ ಈ ಬದುಕು ಕೊಂಚವೂ ನನದಲ್ಲ    ಓ ನಲ್ಲ ,
     ನೀನಿಲ್ಲದ ಈ ಬದುಕು ಕೊಂಚವೂ ನನದಲ್ಲ

             ನೀನೆ ಕೊಟ್ಟ ಪ್ರೀತಿಯ ಹಕ್ಕಿಮರಿ
             ಗರಿಗೆದರಿ ಭಾನಿಗಾರುವ  ಮುನ್ನ
            ನೀನೆ    ಕಾಣದಾದೆಯ  ಓ ನಲ್ಲ
            ಹಾರುವುದ ಮರೆತು ,ಹಾಡುವುದ
             ಮರೆತು, ಬಂಧಿಯಾಗಿದೆ ಪ್ರೀತಿಯ
              ಹಕ್ಕಿ ಮರಿ ನನ್ನ ಹೃದಯ ಪಂಜರದಲ್ಲಿ

            ರೆಕ್ಕೆ  ಮುರಿದ ಹಕ್ಕಿ ಮರಿ
         ಬಿಕ್ಕಿ ಬಿಕ್ಕಿ ಅಳುತಲಿದೆ
            ನಿನ್ನದೆ ದಾರಿ ಕಾಯುತಿದೆ
            ಕೆಲವೊಮ್ಮೆ  ಗುನುಗುತಿದೆ
         ನೀನಿಲ್ಲದ ಈ ಬದುಕು ಕೊಂಚವೂ ನನದಲ್ಲ    ಓ ನಲ್ಲ ,
ನೀನಿಲ್ಲದ ಈ ಬದುಕು ಕೊಂಚವೂ ನನದಲ್ಲ

Monday, September 27, 2010

ಸುಮ್ನೆ






ಪೆದ್ದು ಮುದ್ದು ಪ್ರೀತಿಯಲ್ಲ
ಕದ್ದು ನಿನ್ನ ನೋಡಲಿಲ್ಲ
ನಿದ್ದೆ ಯಲ್ಲೂ  ನಿಂದೆ ಸುದ್ಧಿ
ಎದ್ದ ಮೇಲು ನಿಂದೆ ಸದ್ದು
ನಾನು ಗೆದ್ಧೆ ಎನ್ನಲಿಲ್ಲ
ಪ್ರೀತಿ ಒಂದು ಯುದ್ಧವಲ್ಲ
ಇದ್ದದನ್ನು ಇದ್ದ ಆಗೇ
ಹೇಳಲೆನ್ಧೆ ಇಂಥದೊಂದು  
ಪದ್ಯ ಹುಟ್ಟಿತೆ ?              
            

Saturday, September 25, 2010

ಸಂಶಯ












                                  







                                ಸಂಶಯ   
     
                              ಕಾಯುತಿದೆ  ಮನ
                               ನಿನ್ನ ಬರುವಿಕೆಯನ್ನ
                               ನೆನೆಯುತಿದೆ ಮನ
                               ನಿನ್ನ ಇರುವಿಕೆಯನ್ನ
                               ಕಣ್ಣ ಸನ್ನೆಯ  ಭಾಷೆ
                                  ಕಲಿಯುವುದಿಲ್ಲ ನೀನೇಕೆ  
                                ಮನದ ಪಿಸು ದ್ವನಿಯ
                                          ಅರಿಯುವುdiಲ್ಲ  ನೀನೇಕೆ           
                                ಬಿಟ್ಟೆ ಬಿಡಲೇ ನಾನು 
                                     ನಿನ್ನ  ನಿರೀಕ್ಷೆಯನ್ನ ?     
                                                                                                                                                                           
                                                                                                                                                                        
                                                                                                                                                                          
                                                                                                                                                            
               

Monday, September 20, 2010

ಏಕೆ(?)

                                                 







                                                










                                               ಏಕೆ(?)

ಮೌನ ಮುರಿದು ಮಾತಾಡದೆ
ಹೋದೆ  ನಾನೇಕೆ 
  ಮನದಮರೆಯ ಪರದೆ  ಸರಿಸದೇ  
ಹೋದೆ  ನಾನೇಕೆ   
ಪ್ರೀತಿಯ ಹೂವು ಹರಳಿದ ವೇಳೆ 
  ಪರಿಮಳವ ತಡೆದೆ  ನಾನೇಕೆ    
 ಮನದ ಪಿಸು ಮಾತಿಗೆ ಕಿವಿಗೊಡದೆ     
ಹೋದೆ  ನಾನೇಕೆ  
                 ನಿನ್ನ ಮರೆಯದೆ ಹೋದೆ ನಾನೇಕೆ                          
          

Friday, August 27, 2010

ನೆನಪುಗಳು



ನಾನು ಹೊಸ ಕಾಲೇಜ್ಗೆ ಹೋಗೋಕೆ ಶುರು ಮಾಡಿ ಒಂದು ತಿಂಗಳು ಕಳೆಯಿತು ,ನನ್ನ ಇಂಜಿನಿಯರಿಂಗ್ ದಿನಗಳ ನೆನಪು ಬರೋದಕ್ಕೆ ಶುರು ಆಗಿವೆ , ನಾವು ದಿನಾ ಬೆಳಗ್ಗೆ ೨೫೩ ನಂಬರ್ ಬಸ್ ಗಳನ್ನು ಕಾಯೋದು , ಸೋಲದೇವನಹಳ್ಳಿ ಬಸ್ ಸ್ಟಾಪ್ ಇಂದ ನಮ್ಮ ಕಾಲೇಜ್ ವರೆಗೂ ಎರಡು ಕಿಲೋ ಮೀಟರ್ ನಡೆಯೋದು , ಶುರು ವಿನಲ್ಲಿ ಬೇಜಾರು ಆಗಿದ್ದು ನಿಜ ಆದರೆ ಬೇಜಾರು ಬಹಳ ದಿನ ಇರಲಿಲ್ಲ ,ನಾವೆಲ್ಲರೂ ಎಡರು ಕಿಲೋ ಮೀಟರ್ ನಡೆಯೋದನ್ನೇ ಎಂಜಾಯ್ ಮಾಡಿದ್ವೇ , ಮತ್ತೆ ಸೋಲದೇವನಹಳ್ಳಿ ಬಸ್ ಸ್ಟಾಪ್ ನಲ್ಲಿ ಇದ್ದ ದೊಡ್ಡ ಹಾಲದ ಮರ ,ಆದರೆ ಆ ಮರ ಇವಾಗ ಇಲ್ಲ ,ನಮ್ಮ ಮೆಚಿನ್ನ ಕ್ಲಾಸ್ ರೂಂ ,ಕ್ಯಾಂಟೀನ್ ಇವೆಲ್ಲ ಬರಿ ನೆನಪು ಮಾತ್ರ .


ನನಗೆ ಕ್ಲಾಸ್ ಇಂಟರೆಸ್ಟಿಂಗ್ ಆಗಿ ಇಲ್ಲ ಅಂದ ತಕ್ಷಣ ನನ್ನ ಗಮನ ಲಾಸ್ಟ್ ಪೇಜ್ ಮೇಲೆ ಹೂಗುತ ಇತ್ತು , ನಾನು ನಿಜವಾಗಲು ಪಾಠ ಕೇಳಿದು ಶೋಭ ,ವಾಣಿ ಮೇಡಂ ಮರಿ ಗೌಡ ಮತ್ತೆ ನರೇಂದ್ರ ಸರ್ ಕ್ಲಾಸ್ ಗಳಲ್ಲೇ :):):) ಅದರಲ್ಲೂ ಮರಿ ಗೌಡ ಸರ್ ಕ್ಲಾಸ್ ನಲ್ಲಿ ಫುಲ್ ಇಂಟರೆಸ್ಟ್ :):):) ,ನಮ್ಮ ಕಾಲೇಜ್ ಇವಾಗ ತುಂಬ ಚನ್ನಾಗಿ ಇದೆ. ಕನ್ನಡ ಫಿಲಂ ಶೂಟಿಂಗ್ ಗಳಿಗೆ ಏನು ಕೊರತೆ ಇಲ್ಲ , ಜಾಲಿ ಡೇಸ್ ಫಿಲಂ ನೆನಪು ಮಾಡಿಕೊಂಡರೆ ಸಾಕು ಆಚಾರ್ಯ ನೆನಪು ಬಂತು ಅಂತನೆ.


ನಂದಿನಿ ಅಂತು ಕಾಪಿ ಮಾಡೋದ್ರಲ್ಲಿ ನಂಬರ್ ೧ ಆಗಿದ್ಲು ,ನಾನು ಅವಳಿಗೆ ಬುದ್ಧಿವಾದ ಹೇಳುತ ಇರುತಿದ್ದೆ ನಾವು ಇಷ್ಟ ಪಟ್ಟು ಓದ ಬೇಕು ಕಷ್ಟ ಪಟ್ಟು ಅಲ್ಲ ನಾವು ಓದುವುದನ್ನ ಪ್ರೀತಿಸ ಬೇಕು ಅಂತ ಅದಕೆ ಅವಳು ನೀನು ಓದೋದರ ಬಗ್ಗೆ ಮಾತಾಡುತಿಧಿಯೋ ಅಥವಾ ಮನುಷ್ಯರ ಬಗ್ಗೆ ನೋ ಅಂತ ಕೇಳುತ ಇದ್ಲು :):) ನಾನು ಪ್ರೀತಿ anno ಪದ ಉಪಯೋಗಿಸುತಿದ್ದೆ ಅದಕ್ಕೆ ,


ಒಂದು ಸಾರಿ ಪನಿಭುಶನ್ ಸರ್ ಕ್ಲಾಸ್ ನಲ್ಲಿ ಒಬ್ಬ ನಿದ್ದೆ ಮಾಡುತ ಇದ್ದ , ಅವನ ಗೊರಕೆ ಬರುತ ಬರುತ ಜಾಸ್ತಿ ಆಗುತ ಹೋಯಿತು ,ನಾವೆಲ್ಲರೂ ಕಿಟಕೆ ಇಂದ ಹೊರಗೆ ನೋಡುತ ಇದ್ವಿ ಏನು ಶಬ್ದ ಇದು ಅನ್ನೋ ಅಸ್ಟರಲ್ಲಿ ಗೊತಾಯಿತು ಅದು ಅವನ ಗೊರಕೆ ಅಂತ ಸರ್ ಸಕತ್ ಕೂಲ್ ಅವನಿಗೆ ಡಿಸ್ಟರ್ಬ್ ಮಾಡಬೇಡಿ ಅಂತ ಹೇಳಿದ್ರು :):)) ನಮಗಂತು ನಗು ನಿಲಿಸಲು ಕಷ್ಟ ವಾಗಿ ಹೋಯ್ತು ,

ವಾಣಿ ಮೇಡಂ ಕ್ಲಾಸ್ ನಲ್ಲಿ ಅಂತು ಒಳ್ಳೆ ತಮಾಷೆ ನಡೀತಾ ಇರುತ ಇತ್ತು ಅವರು

ಕ್ಲಾಸ್ ಮಧ್ಯ ಪ್ರಶ್ನೆ ಕೇಳಿದ್ರೆ ಯಾರು ಉತ್ತರ ಕೊಡ್ತಾ ಇರಲಿಲ್ಲ ಅದಕ್ಕೆ ಅವರು 'y no reaction  ' ಅಂತ ಕೇಳ್ತಿದ್ರು ಅದಕೆ ನಾವು 'in internals v will give u full reaction mam ' ಅಂತ ಇದ್ವಿ ,






ಹಾಗೆ ಬರೆಯುತಾ ಹೋದರೆ ಇನ್ನು ಬಹಳಷ್ಟು ide ಸದ್ಯಕ್ಕೆ ಇಷ್ಟು ಸಾಕು ...........
.