Tuesday, September 28, 2010

ನನ್ನದಲ್ಲದ ಬದುಕು

                        ಅರಳಿದ ಕಂಗಳಲಿ ಮಿಂಚು
                    ಕೊಂಚವೂ  ಉಳಿದಿಲ್ಲ ,
                  ಕೈ ಬಳೆಯ ನಾಧ ಕಳೆದು
                  ಹೋಗಿದೆಯಲ್ಲ  ,
               ಅಕ್ಕರೆಯ ಸಕ್ಕರೆಯ ಪಿಸುಮಾತು
                ಕೇಳಿಬಂದಿಲ್ಲ ,
                   ನೀನಿಲ್ಲದ ಈ ಬದುಕು ಕೊಂಚವೂ ನನದಲ್ಲ    ಓ ನಲ್ಲ ,
     ನೀನಿಲ್ಲದ ಈ ಬದುಕು ಕೊಂಚವೂ ನನದಲ್ಲ

             ನೀನೆ ಕೊಟ್ಟ ಪ್ರೀತಿಯ ಹಕ್ಕಿಮರಿ
             ಗರಿಗೆದರಿ ಭಾನಿಗಾರುವ  ಮುನ್ನ
            ನೀನೆ    ಕಾಣದಾದೆಯ  ಓ ನಲ್ಲ
            ಹಾರುವುದ ಮರೆತು ,ಹಾಡುವುದ
             ಮರೆತು, ಬಂಧಿಯಾಗಿದೆ ಪ್ರೀತಿಯ
              ಹಕ್ಕಿ ಮರಿ ನನ್ನ ಹೃದಯ ಪಂಜರದಲ್ಲಿ

            ರೆಕ್ಕೆ  ಮುರಿದ ಹಕ್ಕಿ ಮರಿ
         ಬಿಕ್ಕಿ ಬಿಕ್ಕಿ ಅಳುತಲಿದೆ
            ನಿನ್ನದೆ ದಾರಿ ಕಾಯುತಿದೆ
            ಕೆಲವೊಮ್ಮೆ  ಗುನುಗುತಿದೆ
         ನೀನಿಲ್ಲದ ಈ ಬದುಕು ಕೊಂಚವೂ ನನದಲ್ಲ    ಓ ನಲ್ಲ ,
ನೀನಿಲ್ಲದ ಈ ಬದುಕು ಕೊಂಚವೂ ನನದಲ್ಲ

3 comments:

  1. ಇಂದು

    ನನ್ನದಲ್ಲದ ಬದುಕು ಎಲ್ಲರದು

    ಎಲ್ಲವು ಅವನು ನೀಡಿದ ಬದುಕು

    ಆ ''ಅವನು'' ಯಾರು ಎಂಬುದು ನಮ್ಮ ಮನಸಿಗೆ ಬಿಟ್ಟ ವಿಚಾರ

    ಒಳ್ಳೆಯ ಚಿಂತನೆ

    ReplyDelete
  2. Good one, I am glad that you shared the first copy (I guess so ;)) of this with me...

    ReplyDelete
  3. @ guru, thanks guru avare , kavithe oodhidakke:)
    @ vidya ,thanks vidya dear

    ReplyDelete