ಅರಳಿದ ಕಂಗಳಲಿ ಮಿಂಚು
ಕೊಂಚವೂ ಉಳಿದಿಲ್ಲ ,
ಕೈ ಬಳೆಯ ನಾಧ ಕಳೆದು
ಹೋಗಿದೆಯಲ್ಲ ,
ಅಕ್ಕರೆಯ ಸಕ್ಕರೆಯ ಪಿಸುಮಾತು
ಕೇಳಿಬಂದಿಲ್ಲ ,
ನೀನಿಲ್ಲದ ಈ ಬದುಕು ಕೊಂಚವೂ ನನದಲ್ಲ ಓ ನಲ್ಲ ,
ನೀನಿಲ್ಲದ ಈ ಬದುಕು ಕೊಂಚವೂ ನನದಲ್ಲ
ನೀನೆ ಕೊಟ್ಟ ಪ್ರೀತಿಯ ಹಕ್ಕಿಮರಿ
ಗರಿಗೆದರಿ ಭಾನಿಗಾರುವ ಮುನ್ನ
ನೀನೆ ಕಾಣದಾದೆಯ ಓ ನಲ್ಲ
ಹಾರುವುದ ಮರೆತು ,ಹಾಡುವುದ
ಮರೆತು, ಬಂಧಿಯಾಗಿದೆ ಪ್ರೀತಿಯ
ಹಕ್ಕಿ ಮರಿ ನನ್ನ ಹೃದಯ ಪಂಜರದಲ್ಲಿ
ರೆಕ್ಕೆ ಮುರಿದ ಹಕ್ಕಿ ಮರಿ
ಬಿಕ್ಕಿ ಬಿಕ್ಕಿ ಅಳುತಲಿದೆ
ನಿನ್ನದೆ ದಾರಿ ಕಾಯುತಿದೆ
ಕೆಲವೊಮ್ಮೆ ಗುನುಗುತಿದೆ
ನೀನಿಲ್ಲದ ಈ ಬದುಕು ಕೊಂಚವೂ ನನದಲ್ಲ ಓ ನಲ್ಲ ,
ನೀನಿಲ್ಲದ ಈ ಬದುಕು ಕೊಂಚವೂ ನನದಲ್ಲ