Tuesday, April 5, 2011

ಮಲ್ಲಿಗೆ ಮನಸು

ಮಲ್ಲಿಗೆ  ಮನಸು ...........................


ಮನಸೇ ಹೊರಟೆ ನೀ ಎಲ್ಲಿಗೆ
ಮುಡಿದು ಕನಸುಗಳ ಮಲ್ಲಿಗೆ ,


ಮನಸ್ಸೇ,,,,,,,ಹಾಗೆ  ನವಿಲಿನಂತೆ ಕುಣಿದಾಡುವ ಮನಸ್ಸು  ,ಹೂವಿನಂತೆ ಹರಳುವ ಮನಸ್ಸು ,ಹಕ್ಕಿಯಂತೆ ಹಾರಾಡುವ ಮನಸ್ಸು ಕೆಲವು ಸಲ 
ಬಾಡಿದ ಹೂವಾಗಿ ಗರಿ ಮುದುರಿದ ಗುಬ್ಬಿಯಾಗಿಬಿಡಬಹುದು ,ಮನಸ್ಸು  ಮಲ್ಲಿಗೆಗಿಂತಲು ಮೃಧು , ಯಾವಾಗ ಯಾಕೆ ಅದಕ್ಕೆ ನೋವಾಗುತದೋ ಒಂದು ತಿಳಿಯುವುದಿಲ್ಲ ,ಇನ್ನು ನಮ್ಮ ಮನಸನ್ನೇ ನಾವು ಅರ್ಥಮಾಡಿಕೊಳ್ಳಲು ಎಷ್ಟು ಕಷ್ಟ ಪಡಬೇಕು ಅಂತ ಒಂದು ಸಂಧರ್ಭ ದಲ್ಲಿ ಇನ್ನೊಬರ ಮನಸನ್ನು ಅರ್ಥ ಮಾಡಿಕೊಲೋದು ಕಷ್ಟವಾದ ಕೆಲಸ :):):) ಇದು  ನನ್ನ ಅನುಭವಕ್ಕೆ ಬರುತಿರುವಂತ  ವಿಷಯ ,
ಎಲ್ಲಿಂದಲೋ ಕೇಳಿ ಬರುವ ನಮ್ಮ ಮೆಚಿನ್ನ ಹಾಡೊಂದು ಥಟ್ಟನೆ ಮನಸಿಗೆ ಉಲ್ಲಾಸದ ಅನುಭವವನ್ನು ತಂದು ಕೊಡಬಹುದು,
ಯಾವುದೋ ಹಳೆಯ ನೆನಪೊಂದು ನಮ್ಮ ನು  flashback ಗೆ ಕರೆದುಕೊಂಡು ಹೋಗಿಬಿಡಬಹುದು ,ಹಾಗೆ ಬಾಲ್ಯದ ಸವಿ ನೆನಪು ಮತ್ತೆ ನಮ್ಮನು ಮಕ್ಕಳನಾಗಿಸಿ ಬಿಡಬಹುದು ,  
ಎಂದು ಇಲ್ಲದ  ಮನಸ್ಸು ಮಳೆಯ   ಬರುವಿಕೆಗಾಗಿ  ಕಾಯುತ್ತ ಕುಳಿತಿದೆ ಅಂದರೆ ಅದು ಪ್ರೀತಿಯಲ್ಲಿ ಬೀಳೋದ್ರಲ್ಲಿದೇ 
ಎಂದೇ  ಅರ್ಥ,
ಕೆಲವು ಸಾರಿ ಮನಸ್ಸಲ್ಲಿ ಏನೋ ಉಳಿದುಕೊಂಡು ಬಿಡುತ್ತದೆ ಮನಸ್ಸಿನ ಮಾತು ಮನಸಲ್ಲೇ ಅನ್ನೋ ಹಾಗೆ ಇಂತ  
ಸಂಧರ್ಭದಲ್ಲೇ ಅದು  ಗುಬ್ಬಿ ಮರಿಯ ಹಾಗೆ ಮುದುರಿಕೊಂಡು ತನ್ನಷ್ಟಕ್ಕೆ ತಾನೇ ಇರಲು ಇಷ್ಟ ಪಡುತ್ತದೆ ,
ಸಿನಿಮಾ ಗಳ slowmotion    ನೆನಪು ಮಾಡಿಕೊಳ್ಳ ಬಹುದು hero   ಒಬ್ಬ railway  ಸ್ಟೇಷನ್ platform  ನಲ್ಲಿ  ಏನೋ ಕಳೆದು ಹೋಯ್ತು ಅನ್ನೋ ಭಾವನೆಯಲ್ಲಿ ನಿಂತಿರುತಾನೆ   ಅವನ ಕಣ್ಣ ಮುಂದೆ ಅ ಟ್ರೈನ್  ಹೊರಡುತದೆ ಆತ ಟ್ರೈನ್ ಅನ್ನು ನೋಡುತಲೆ ಇರುತ್ತಾನೆ  ಕೊನೆಗೂ   ಅವನು ಮನಸ್ಸನ್ನು 
ಬಿಚ್ಚಿ ಅ ಹುಡುಗಿಯ ಮುಂದೆ ಇಡುವುದಿಲ್ಲ ಟ್ರೈನ್  passಆಗಿ ಮರೆಯಾಗುತ್ತದೆ...............................
ಇನ್ನು ಕೆಲವು ಸಲ ಬದುಕಲ್ಲಿ ಬಣ್ಣ ಗಳೇ ಕಾಣಿಸುವುದಿಲ್ಲ  ಎಲ್ಲಿ ನೋಡಿದರು ಬರಿ ಎರಡೇ ಬಣ್ಣ ಒಂದು ಬಿಳಿ ಮತ್ತು 
ಇನ್ನೊಂದು ಕಪ್ಪು ,ಬಣ್ಣಗಳಿಲ್ಲದ ಬದುಕು ಇದರ ಅರ್ಥ ಮನಸ್ಸಿಗೆ ಮಾಡಿದನ್ನೇಮಾಡಿ ನೋಡಿದನ್ನೇ ನೋಡಿ ಬೋರ್ ಹೊಡಿತಾ ಇದೆ ಅಂತ , ನೋಡಿ ನಾವು ನಮ್ಮ daily routines ಗಳ ಮದ್ಯ ಸಿಕ್ಕಿಹಾಕಿಕೊಂಡು,,,,,,,,,ಮನಸ್ಸಿಗೆ boredom  ಅನುಭವವನ್ನು ಕೊಟ್ಟಿರುತಿವಿ ಅಂತ ಸಮಯದಲ್ಲಿ ಅದು change ಬಯಸುತಿರುತದ್ದೆ:):):)
ನಾವು    ನಮ್ಮಬದುಕಲ್ಲಿ ಏನನ್ನೋ ಯಾರನ್ನೋ miss ಮಾಡಿಕೊಂಡೆ ಇರುತೀವಿ ,ಮನಸ್ಸಿನ ಬದುಕಿನ  ಸಹಜವಾದ ಗುಣ 
ಅದೇ ಅಲ್ಲವೇ  ಇರುವುದೆಲ್ಲವ ಬಿಟ್ಟು ಇರದುದರ ಎಡೆಗೆ ತುಡಿಯುವುದೇ ಜೀವನ ,
ಕಾಲೇಜ್ ನಲ್ಲಿ ಕುಳಿತಾಗ ಮನೆಯದೆ ಚಿಂತೆ  ಮನೆಯನ್ನು  miss ಮಾಡಿಕೊಳುತಾರೆ ,ಮನೆಯಲ್ಲಿ ಕುಳಿತಾಗ 
ಕಾಲೇಜ್ miss ಮಾಡಿಕೊಳುತ್ತಾರೆ :):), ಇನ್ನು ಯಾರನ್ನೋ miss ಮಾಡಿಕೊಳ್ಳೋಕೆ ಶುರು ಮಾಡಿದ್ರೆ ಮುಗಿದೇ ಹೋಯ್ತು ಬಿಡಿ ಏನು ಅಂತ ಬರಿತ ಹೋಗ್ಲಿ :):),  
ಕಣ್ಣ ಮುಂದೆ ನಮ್ಮ ಸ್ನೇಹಿತರು ಆಪ್ತರು ಎಲ್ಲರು ಇದ್ದರುಕೂಡ  ಯಾರನ್ನೋ ಹುಡುಕೋಕೆ ಶುರು ಮಾಡುತ್ತೆ ನಮ್ಮ 
ಮನಸ್ಸು ಎಲ್ಲಾರು ಇದ್ದಾರೆ ಆದ್ರೆ ಅವ್ರು ಇಲ್ಲ ಅನ್ನಿಸುತ್ತದೆ                                               





No comments:

Post a Comment